PSI ಉಚಿತ ಕೋಚಿಂಗ್ 2024: ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಲೇಖನದಲ್ಲಿ ನಾವು ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ನೀಡಲಾಗುತ್ತಿರುವ ಪಿಎಸ್ಐ ಉಚಿತ ಕೋಚಿಂಗ್ ತರಬೇತಿಯ ಕುರಿತು ಎಲ್ಲಾ ಮಾಹಿತಿಗಳನ್ನು ಹಂಚಿಕೊಳ್ಳಲಿದ್ದೇವೆ ದಯವಿಟ್ಟು ಸಂಪೂರ್ಣ ಲೇಖನವನ್ನು ಓದಿ ಈ ಉಚಿತ ಕೋಚಿಂಗ್ ಅಪ್ಲಿಕೇಶನ್ ಗೆ ಅರ್ಜಿಯನ್ನು ಸಲ್ಲಿಸಿ ಇದರ ಲಾಭವನ್ನು ಪಡೆದುಕೊಳ್ಳುವ ಮೂಲಕ ನಿಮ್ಮ ಕನಸಿನ ಹುದ್ದೆಯನ್ನು ಪಡೆಯಬಹುದು.
ಸ್ನೇಹಿತರೆ ಈ ಫ್ರಿ ಕೋಚಿಂಗ್ ಅಪ್ಲಿಕೇಶನ್ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಕೆಳಗಡೆ ನೀಡಿರುವ ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿಕೊಂಡು ಕೆಳಗಡೆ ಕೊಟ್ಟಿರುವ ಡೈರೆಕ್ಟ್ ಅಪ್ಲೈ ಲಿಂಕ್ ಮೂಲಕ ಕೇವಲ ಅಧಿಕೃತ ವೆಬ್ ಸೈಟ್ ನಲ್ಲಿ ಅಥವಾ ಜಾಲತಾಣದಲ್ಲಿ ಮಾತ್ರವೇ ಅರ್ಜಿ ಸಲ್ಲಿಸಲು ಸೂಚಿಸಲಾಗಿರುತ್ತದೆ ನಮ್ಮ ಈ ಲೇಖನದ ಕೊನೆಯಲ್ಲಿ ಅರ್ಜಿ ಸಲ್ಲಿಸಲು ಅಧಿಕೃತವಾಗಿರುವಂತ ಲಿಂಕನ್ನು ನೀಡಲಾಗಿದೆ ದಯವಿಟ್ಟು ಪರಿಶೀಲಿಸಿ ಅರ್ಜಿಯನ್ನು ಸಲ್ಲಿಸಿ.
PSI ಉಚಿತ ಕೋಚಿಂಗ್ ಅಧಿಸೂಚನೆ 2024
2024-25ನೇ ಸಾಲಿಗೆ ಸಮಾಜ ಕಲ್ಯಾಣ ಇಲಾಖೆಯ ಪರೀಕ್ಷಾ ಪೂರ್ವ ತರಬೇತಿ ಕೇಂದ್ರದ ಮೂಲಕ ಪರಿಶಿಷ್ಟ ಜಾತಿ ಅಭ್ಯರ್ಥಿಗಳಿಗೆ ಸಬ್ ಇನ್ಸೆಕ್ಟರ್ (PSI)/ಪ್ಯಾರ ಮಿಲಿಟರಿ ಪೂರ್ವ ನೇಮಕಾತಿ ತರಬೇತಿ ನೀಡುವ ಸಂಬಂಧ ಕರ್ನಾಟಕ ರಾಜ್ಯದ 04 ಕಂದಾಯ ವಿಭಾಗಗಳಲ್ಲಿ ಪ್ರತ್ಯೇಕವಾಗಿ 75 ದಿನಗಳ ವಸತಿಯುತ ತರಬೇತಿ ನೀಡುವ ಕುರಿತು ಅಧಿಸೂಚನೆ ಹೊರಡಿಸಲಾಗಿದೆ.
2024-25ನೇ ಸಾಲಿಗೆ ಸಮಾಜ ಕಲ್ಯಾಣ ಇಲಾಖೆಯ ಪರೀಕ್ಷಾ ಪೂರ್ವ ತರಬೇತಿ ಕೇಂದ್ರದ ಮೂಲಕ ಪರಿಶಿಷ್ಟ ಜಾತಿ ಅಭ್ಯರ್ಥಿಗಳಿಗೆ ವಸತಿಯುತ, ಸಬ್ ಇನ್ಸೆಕ್ಟರ್ (PSI)/ಪ್ಯಾರ ಮಿಲಿಟರಿ ಪೂರ್ವ-ನೇಮಕಾತಿ ತರಬೇತಿ ನೀಡಲು ಉದ್ದೇಶಿಸಲಾಗಿದೆ.
ವಸತಿಯುತ, ಸಬ್ ಇನ್ಸೆಕ್ಟರ್ (PSI)/ಪ್ಯಾರ ಮಿಲಿಟರಿ ಪೂರ್ವ ನೇಮಕಾತಿ ತರಬೇತಿಯ ಅವಧಿ, ಶೈಕ್ಷಣಿಕ ವಿದ್ಯಾರ್ಹತೆ, ಅರ್ಜಿಸಲ್ಲಿಸಬೇಕಾದ ವೆಬ್ ಸೈಟ್ ವಿಳಾಸ ಮತ್ತು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕದ ವಿವರಗಳು ಈ ಕೆಳಕಂಡಂತಿದೆ.
PSI ಉಚಿತ ಕೋಚಿಂಗ್ ವಿವರಗಳು
ಕ್ರಮ ಸಂಖ್ಯೆ | ವಿವರಗಳು | |
01 | ಸಬ್ ಇನ್ಸ್ಪೆಕ್ಟರ್ ಪಿಎಸ್ಐ(PSI) /ಪ್ಯಾರಾ ಮಿಲಿಟರಿ ಪೂರ್ವ ನೇಮಕಾತಿ ತರಬೇತಿ | ಪರಿಶಿಷ್ಟ ಜಾತಿ ಅಭ್ಯರ್ಥಿಗಳಿಗೆ ವಸತಿಯುತ, ಸಬ್ ಇನ್ವೆಕ್ಟರ್ (PSI)/ಪ್ಯಾರ ಮಿಲಿಟರಿ ಪೂರ್ವ-ನೇಮಕಾತಿ ತರಬೇತಿ ನೀಡುವ ಸಂಬಂಧ ಕರ್ನಾಟಕ ರಾಜ್ಯದ 04 ಕಂದಾಯ ವಿಭಾಗಗಳಲ್ಲಿ ಪ್ರತ್ಯೇಕವಾಗಿ 75 ದಿನಗಳ ವಸತಿಯುತ ತರಬೇತಿ ನೀಡಲಾಗುವುದು. |
02 | ವಯಸ್ಸು | ಕನಿಷ್ಠ 21 ವರ್ಷ, ಗರಿಷ್ಠ 32 ವರ್ಷ ಸೇವಾನಿರತವಾಗಿರುವ ಅಭ್ಯರ್ಥಿಗಳಿಗೆ ಗರಿಷ್ಠ 40 ವರ್ಷ |
03 | ವಿದ್ಯಾರ್ಹತೆ | ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದೊಳಗೆ ಯು.ಜಿ.ಸಿ ಇಂದ ಮಾನ್ಯತೆ ಪಡೆದ ಅಂಗೀಕೃತ ವಿಶ್ವವಿದ್ಯಾಲಯದಲ್ಲಿ ಪದವಿ (Degree) ಅಥವಾ ತತ್ಸಮಾನ (ಪಿಯುಸಿ ನಂತರ ಪದವಿಗೆ ಸಮನಾದ ಯಾವುದೇ ವಿದ್ಯಾರ್ಹತೆ) ಶಿಕ್ಷಣ ಪಾಸ್ ಮಾಡಿರಬೇಕು. |
04 | ಸೇವಾನಿರತ ಅಭ್ಯರ್ಥಿಗಳಿಗೆ ಅನುಭವ | ಪೊಲೀಸ್ ಇಲಾಖೆಯ ಯಾವುದೇ ವ್ಯಂದದಲ್ಲಿ ಕನಿಷ್ಠ 5 ವರ್ಷ ಸೇವೆ ಸಲ್ಲಿಸಿರಬೇಕು. |
05 | ಅಭ್ಯರ್ಥಿಯ ಸಾಮಾನ್ಯ ಅರ್ಹತೆ | 1. ಕರ್ನಾಟಕ ರಾಜ್ಯದ ನಿವಾಸಿಯಾಗಿರಬೇಕು; 2. ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದೊಳಗೆ ನಿಗಧಿತ ನಮೂನೆಯಲ್ಲಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಪಡೆದಿರಬೇಕು. 3.ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದೊಳಗೆ ಪದವಿಯಲ್ಲಿ ಉತ್ತೀರ್ಣರಾಗಿರಬೇಕು. |
06 | ಎತ್ತರ | ಪುರುಷರಿಗೆ ಕನಿಷ್ಠ 163 ಸೆಂ.ಮೀ ಮಹಿಳೆಯರಿಗೆ ಕನಿಷ್ಠ 153 ಸೆಂ.ಮೀ |
07 | ತೂಕ | ಪುರುಷರಿಗೆ ಕನಿಷ್ಠ 50 ಕೆ.ಜಿ ಮಹಿಳೆಯರಿಗೆ ಕನಿಷ್ಠ 45 ಕೆ.ಜಿ |
08 | ಎದೆ (ಪುರುಷರಿಗೆ) | ಕನಿಷ್ಠ 76 ಸೆಂ.ಮೀ |
09 | ಆಯ್ಕೆ ವಿಧಾನ | ಪದವಿಯಲ್ಲಿ ಪಡೆದಿರುವ ಅಂಕಗಳ ಆಧಾರದ ಆಯ್ಕೆ ಮಾಡಲಾಗುವುದು |
10 | ಅರ್ಜಿ ಸಲ್ಲಿಸುವ ವೆಬ್ ಸೈಟ್ ವಿಳಾಸ | petc.kar.nic.in |
11 | ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ | 31.08.2024 |
PSI ಗಮನದಲ್ಲಿಡಬೇಕಾದ ಅಂಶಗಳು
- ಇಲಾಖಾ ವೆಬ್ ಸೈಟ್ ನಲ್ಲಿ ಕಾಲಕಾಲಕ್ಕೆ ನೀಡಲಾಗುವ ಮಾಹಿತಿಯು ಅಧಿಕೃತ ಹಾಗೂ ಅಂತಿಮವಾಗಿರುತ್ತದೆ.
- ಇಲಾಖಾವತಿಯಿಂದ ಯಾವುದೇ ಪತ್ರ ವ್ಯವಹಾರವನ್ನು ನಡೆಸಲಾಗುವುದಿಲ್ಲವಾದ್ದರಿಂದ, ಇಲಾಖಾ ವೆಬ್ ಸೈಟ್ ನ್ನು ಕಾಲಕಾಲಕ್ಕೆ ವೀಕ್ಷಿಸತಕ್ಕದ್ದು.
- ತಪ್ಪು ಮಾಹಿತಿಯ ಕಾರಣದಿಂದ ಊಂಟಾಗಬಹುದಾದ ಲೋಪಗಳಿಗೆ ಸಂಬಂಧಪಟ್ಟ ಅಭ್ಯರ್ಥಿಗಳೇ ಜವಾಬ್ದಾರರಾಗಿರುತ್ತಾರೆ.
ಪೊಲೀಸ್ ಸಬ್ ಇನ್ಸ್ಪೆಕ್ಟರ್ (ಪಿಎಸ್‌ಐ) ಉದ್ಯೋಗಗಳು:
ಕಾನೂನು ಜಾರಿಯಲ್ಲಿ ನೀವು ಸವಾಲಿನ ಮತ್ತು ಲಾಭದಾಯಕ ವೃತ್ತಿಯನ್ನು ಹುಡುಕುತ್ತಿದ್ದೀರಾ? ನಿಮ್ಮ ಸಮುದಾಯಕ್ಕೆ ಸೇವೆ ಸಲ್ಲಿಸಲು ಮತ್ತು ಸಮಾಜದಲ್ಲಿ ಬದಲಾವಣೆ ಮಾಡಲು ನೀವು ಬಯಸುವಿರಾ? ನಂತರ, ಪೊಲೀಸ್ ಸಬ್ ಇನ್ಸ್ಪೆಕ್ಟರ್ (ಪಿಎಸ್‌ಐ) ಉದ್ಯೋಗವು ನಿಮಗೆ ಪರಿಪೂರ್ಣ ಫಿಟ್ ಆಗಿರಬಹುದು!
PSI ಉದ್ಯೋಗದ ಅವಲೋಕನ:
ಪೊಲೀಸ್ ಸಬ್ ಇನ್ಸ್ಪೆಕ್ಟರ್, ಆಗಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವುದು, ಅಪರಾಧಗಳನ್ನು ತನಿಖೆ ಮಾಡುವುದು ಮತ್ತು ಕಾನೂನು ಮತ್ತು ನಿಬಂಧನೆಗಳನ್ನು ಜಾರಿಗೊಳಿಸಲು ನೀವು ಜವಾಬ್ದಾರರಾಗಿರುತ್ತೀರಿ. ಅಪರಾಧಗಳನ್ನು ತಡೆಗಟ್ಟಲು ಮತ್ತು ಪರಿಹರಿಸಲು ನೀವು ಇತರ ಕಾನೂನು ಜಾರಿ ಸಂಸ್ಥೆಗಳು ಮತ್ತು ಸಮುದಾಯ ಸಂಸ್ಥೆಗಳೊಂದಿಗೆ ನಿಕಟವಾಗಿ ಕೆಲಸ ಮಾಡುತ್ತೀರಿ.
ಪ್ರಮುಖ ಜವಾಬ್ದಾರಿಗಳು:
- ಅಪರಾಧಗಳನ್ನು ತನಿಖೆ ಮಾಡಿ ಮತ್ತು ಪುರಾವೆಗಳನ್ನು ಸಂಗ್ರಹಿಸುವುದು.
- ಕಾನೂನುಗಳು ಮತ್ತು ನಿಬಂಧನೆಗಳನ್ನು ಜಾರಿಗೊಲಿಸುವುದು.
- ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದು.
- ಪೊಲೀಸ್ ಸಿಬ್ಬಂದಿ ಮೇಲ್ವಿಚಾರಣೆ ಮಾಡುವುದು.
- ಇತರ ಕಾನೂನುಗಳನ್ನು ಜಾರಿ ಮಾಡಿ ಸಂಸ್ಥೆಗಳೊಂದಿಗೆ ಸಹಕರಿಸುವುದು.
- ಅಪರಾಧಗಳನ್ನು ತಡೆಗಟ್ಟಲು ಸಮುದಾಯದೊಂದಿಗೆ ತೊಡಗಿಸಿಕೊಳ್ಳುವುದು.
ಅರ್ಹತೆಯ ಮಾನದಂಡ:
- ವಯಸ್ಸು: 20-30 ವರ್ಷಗಳು
- ಶಿಕ್ಷಣ: ಬ್ಯಾಚುಲರ್ ಪದವಿ
- ದೈಹಿಕ ಸಾಮರ್ಥ್ಯ: ಅಗತ್ಯವಿರುವ ದೈಹಿಕ ಮಾನದಂಡಗಳನ್ನು ಪೂರೈಸಿಕೊಳ್ಳಿ
ಆಯ್ಕೆ ಪ್ರಕ್ರಿಯೆ:
- ಲಿಖಿತ ಪರೀಕ್ಷೆ
- ದೈಹಿಕ ಸಾಮರ್ಥ್ಯ ಪರೀಕ್ಷೆ
- ಸಂದರ್ಶನ
- ವೈದ್ಯಕೀಯ ಪರೀಕ್ಷೆ
ಪ್ರಯೋಜನಗಳು:
- ಸ್ಪರ್ಧಾತ್ಮಕ ಸಂಬಳ ಮತ್ತು ಪ್ರಯೋಜನಗಳು
- ವೃತ್ತಿ ಪ್ರಗತಿಗೆ ಅವಕಾಶಗಳು
- ಸಮುದಾಯದ ಸೇವೆಯಿಂದ ಹೆಮ್ಮೆ ಮತ್ತು ತೃಪ್ತಿಯ ಭಾವನೆ
- ಸಮಗ್ರ ತರಬೇತಿ ಕಾರ್ಯಕ್ರಮ
ಅರ್ಜಿ ಸಲ್ಲಿಸುವುದು ಹೇಗೆ:
- ಅಧಿಸೂಚನೆಗಳಿಗಾಗಿ ಅಧಿಕೃತ ವೆಬ್‌ಸೈಟ್ ಪರಿಶೀಲಿಸಿ.
- ಆನ್‌ಲೈನ್ ಅರ್ಜಿಯನ್ನು ಸಲ್ಲಿಸಿ.
- ಅರ್ಜಿ ಶುಲ್ಕವನ್ನು ಪಾವತಿಸಿ.
- ಆಯ್ಕೆ ಪ್ರಕ್ರಿಯೆಗೆ ಹಾಜರಾಗಿ
ಗೌರವಾನ್ವಿತ ಪೊಲೀಸ್ ಪಡೆಗೆ ಸೇರಲು ಮತ್ತು ಸಮಾಜದಲ್ಲಿ ಬದಲಾವಣೆಯನ್ನು ಮಾಡಲು ಈ ಅವಕಾಶವನ್ನು ಕಳೆದುಕೊಳ್ಳಬೇಡಿ! PSI ಉದ್ಯೋಗಗಳಿಗೆ ಈಗಲೇ ಅರ್ಜಿ ಸಲ್ಲಿಸಿ!
ಸ್ನೇಹಿತರೆ ಈ ಮಾಹಿತಿಯು ನಿಮಗೆ ಲಾಭದಾಯಕವೇನಿಸಿದರೆ ಅಥವಾ ಒಳ್ಳೆಯ ಸಂದೇಶವನ್ನು ಹೊಂದಿದೆ ಅನಿಸಿದರೆ ದಯವಿಟ್ಟು ನಿಮ್ಮ ಇತರ ಎಲ್ಲಾ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಏಕೆಂದರೆ ಅವರು ಕೂಡ ಈ ಅರ್ಜಿಯ ಲಾಭವನ್ನು ಪಡೆದುಕೊಳ್ಳಲಿ.
ಸೂಚನೆ: ಸ್ನೇಹಿತರೆ ಇಲ್ಲಿ ನೀಡಿರುವ ಮಾಹಿತಿಯು ಅಧಿಕೃತ ಅಧಿಸೂಚನೆಯನ್ನು ಪರಿಶೀಲಿಸಿ ನೀಡಲಾಗಿರುತ್ತದೆ ನಾವು ನಮ್ಮ ಅಧಿಕೃತ ಜಾಲತಾಣದ ಮೂಲಕ ಯಾವುದೇ ರೀತಿಯ ಸುಳ್ಳು ಸುದ್ದಿಗಳನ್ನು ಹರಡಿಸುವುದಿಲ್ಲ ಹಾಗೂ ಯಾವುದೇ ರೀತಿಯ ಹಣವನ್ನು ಕೇಳಿ ಇ-ಮೇಲ್ ಗಳಾಗಲಿ ಕರೆಗಳಾಗಲಿ ಮಾಡುವುದಿಲ್ಲ ಹಾಗೆ ಏನಾದರೂ ಬಂದರೆ ಅದಕ್ಕೆ ಸ್ಪಂದಿಸಬೇಡಿ.
ಪ್ರಮುಖ ಲಿಂಕ್‌ಗಳು
ಪ್ರಮುಖ ಘಟನೆಗಳು | ಲಿಂಕ್‌ಗಳು |
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು | ಇಲ್ಲಿ ಕ್ಲಿಕ್ ಮಾಡಿ |
ಅಧಿಕೃತ ಅಧಿಸೂಚನೆ Pdf | ಇಲ್ಲಿ ಕ್ಲಿಕ್ ಮಾಡಿ |
ಅಧಿಕೃತ ಜಾಲತಾಣ | ಇಲ್ಲಿ ಕ್ಲಿಕ್ ಮಾಡಿ |
ನಮ್ಮ ಮುಖ ಪುಟ ನೋಡಿ | ಇಲ್ಲಿ ಕ್ಲಿಕ್ ಮಾಡಿ |
Thank You ❤️